ದಾತಿವಾರ ಕೋಟೆಯನ್ನು ಹಿರಾಡೊಂಗರ ಎಂದೂ ಕರೆಯುತ್ತಾರೆ. ಇದು ಮಹಾರಾಷ್ಟ್ರದ ಪಾಲ್ಘರ ಜಿಲ್ಲೆಯ ವಸೈನಿಂದ ೭೨ ಕಿಮೀ ದೊರದಲ್ಲಿದೆ. ಈ ಕೋಟೆಯು ವೈತರ್ಣಾನದಿಯ ಪಕ್ಕದಲ್ಲಿರುವ ಸಣ್ಣ ಬೆಟ್ಟದ ಮೇಲೆ ಕಮಾಂಡಿಂಗ್ ತುದಿಯಲ್ಲಿದೆ .ಇದು ಅರ್ನಾಲಾ ಕೋಟೆಯವರೆಗೆ ಸಾಗುತ್ತದೆ == ಇತಿಹಾಸ == ಕೋಟೆಯ ಇತಿಹಾಸದ ಹೆಚ್ಚಿನ ವಿವರಣೆಗಳೇನೂ ದೊರೆತಿಲ್ಲ. ಇದನ್ನು ಪೋರ್ಚುಗೀಸರು ನಿರ್ಮಿಸಿರಬಹುದೆಂದು ಅಂದಾಜಿಸಲಾಗಿದೆ. == ತಲುಪುವುದು ಹೇಗೆ == ಇದರ ಹತ್ತಿರದ ಪಟ್ಟಣ ಸಫಲೆ. ಇದು ಮುಂಬೈನಿಂದ ರೈಲಿನ ಮೂಲಕ ೧೦೭ ಕಿಮೀ (೬೬ ಮೈಲಿ) ಇದೆ. ಕೋಟೆಯ ಮೂಲ ಗ್ರಾಮವು ದಾತಿವೇರ್ ಅಥವಾ ದಾಂತಿವೇರ್ ಆಗಿದೆ. ಇದು ರಸ್ತೆಯ ಮೂಲಕ ಸಫಲೆಯಿಂದ ೧೫-೨೦ ಕಿಮೀ (೯-೧೨ ಮೈಲಿ) ದೂರದಲ್ಲಿದೆ. ಸಫಲೆ ಮತ್ತು ಎಡ್ವಾನ್‌ನಲ್ಲಿ ಉತ್ತಮ ಹೋಟೆಲ್‌ಗಳಿವೆ. ಟ್ರೆಕ್ಕಿಂಗ್ ಮಾರ್ಗವು ದಾತಿವಾರೆ ಗ್ರಾಮದ ಉತ್ತರದ ಗುಡ್ಡದಿಂದ ಪ್ರಾರಂಭವಾಗುತ್ತದೆ. ಈಗ ಕೋಟೆಯವರೆಗೆ ಅತ್ಯಂತ ಸುರಕ್ಷಿತ ಮತ್ತು ವಿಶಾಲವಾದ ರಸ್ತೆ ಇದೆ. ಕೋಟೆಯ ಪ್ರವೇಶ ದ್ವಾರವನ್ನು ತಲುಪಲು ಸುಮಾರು ಅರ್ಧ ಗಂಟೆ ತೆಗೆದುಕೊಳ್ಳುತ್ತದೆ. == ನೋಡಬೇಕಾದ ಸ್ಥಳ == ಕೋಟೆಯ ಕೆಲವು ಗೋಡೆಗಳು ಮತ್ತು ಪಾಳುಬಿದ್ದ ಬುರುಜುಗಳು ಬೇಟಿ ನೀಡಲು ಸೂಕ್ತವಾಗಿವೆ. == ಉಲ್ಲೇಖಗಳು ==